ಕ್ರಿನೊಲೀನ್ 	
ಸಾದಾ ನೇಯ್ಗೆಯ ಗಡಸು ಬಟ್ಟೆ. ಇದಕ್ಕೆ ವಜ್ರ ಸರಿಯಿಂದ (ಗ್ಲೂ) ತುಂಬ ಗಂಜಿ ಹಾಕಿರುತ್ತಾರೆ. ಜಿಗಿತದ (ಸ್ಟಿಫ್‍ನೆಸ್) ಲಕ್ಷಣವನ್ನು ಕೊಡಲು ಇದನ್ನು ವಿಶಿಷ್ಟ ಕ್ರಮದಲ್ಲಿ ಹಿಗ್ಗಲಿಸುತ್ತಾರೆ (ಸ್ಟ್ರೆಚ್). ಮೊದಲಲ್ಲಿ ಇದನ್ನು ಕುದುರೆ ಕೂದಲಿನಿಂದ ಅಥವಾ ಹತ್ತಿ ನೂಲಿನಿಂದ ವಿಶಿಷ್ಟ ರೀತಿಯಲ್ಲಿ ತಯಾರಿಸುತ್ತಿದ್ದರು. ಇದನ್ನು ಮುಖ್ಯವಾಗಿ ಲಘು ಅಂಗಿಗಳಿಗೂ ಒಳ್ಪದರದ ಬಟ್ಟೆಗಳಿಗೂ ಪುಸ್ತಕ ಬೈಂಡು ಮಾಡುವುದಕ್ಕೂ ಉಪಯೋಗಿಸುತ್ತಾರೆ.								(ವಿ.ಎಸ್.ವಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ